ಕೊಡಗಿನಲ್ಲಿ ಕಳೆಗುಂದಿದ ಗಣೇಶೋತ್ಸವದ ಸಂಭ್ರಮ - ಕೊಡಗು ಭೂಕುಸಿತ
🎬 Watch Now: Feature Video
ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಹಾಮಳೆ, ಭೂ ಕುಸಿತ ಹಾಗೂ ಪ್ರವಾಹದಿಂದ ಜನತೆ ಬೇಸತ್ತಿದ್ದು, ಈ ಬಾರಿಯೂ ಸಹ ಅದೇ ದುಸ್ಥಿತಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿರುವುದರಿಂದ ಈ ಬಾರಿಯ ಗಣೇಶೋತ್ಸವದ ಹುರುಪು ಜನರಲ್ಲಿ ಇಲ್ಲದಂತಾಗಿದೆ. ಈ ಬಾರಿಯ ಪ್ರವಾಹ ಹಾಗೂ ಭೂ ಕುಸಿತದ ಜೊತೆಗೆ ಸಾಂಕ್ರಾಮಿಕ ಕೊರೊನಾ ಸೇರಿಕೊಂಡು ಹಬ್ಬದ ಸಂಭ್ರಮವನ್ನು ಕೊಡವರಿಂದ ಕಸಿದುಕೊಂಡಿದೆ. ಜಿಲ್ಲೆಯಲ್ಲಿ ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು, ಗಣೇಶೋತ್ಸವ ಆಚರಣೆಗೆ ತಯಾರಿ ನಡೆಸುತ್ತಿದ್ದವು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮವೇ ಕಾಣಿಸುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ವಿನಾಯಕ ಸೇವಾ ಸಮಿತಿಗಳು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯಗಳು ಮಾತ್ರ ಕಂಡು ಬರುತ್ತಿವೆ. ಮಂಜಿನ ನಗರಿ ಮಡಿಕೇರಿಯ ಐತಿಹಾಸಿಕ ದೇವಾಲಯದ ಶ್ರೀ ಕೋಟಿ ಮಹಾಗಣಪತಿ ದೇವಾಸ್ಥಾನದಲ್ಲಿ ಬೆರಳೆಣಿಕೆಯಷ್ಟು ಭಕ್ತರಷ್ಟೇ ದೇವರ ದರ್ಶನ ಪಡೆದು ತೆರಳುತ್ತಿರುವ ದೃಶ್ಯಗಳು ಕಂಡು ಬಂದವು.