ಕಾರಿನ ಗ್ಲಾಸ್ ಒಡೆದು ಕಳ್ಳತನ... ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ! - ದಾವಣಗೆರೆಯಲ್ಲಿ ಕಳ್ಳತನ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6001678-thumbnail-3x2-dvng.jpg)
ರಸ್ತೆಯ ಬದಿ ನಿಲ್ಲಿಸಿದ ಕಾರಿನ ಗ್ಲಾಸ್ ಒಡೆದು ಕಳ್ಳನೊಬ್ಬ ಕ್ಷಣಾರ್ಧದಲ್ಲೇ ಹಣ ಲಪಟಾಯಿಸಿದ ಘಟನೆ ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಸುಲ್ತಾನ್ ಜ್ಯೂವೆಲರ್ಸ್ ಬಳಿ ನಡೆದಿದೆ. ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದ ಮಹೇಶ್ ಎನ್ನುವರು ಬ್ಯಾಂಕ್ಗೆ ಕಟ್ಟಲು ಹಣ ಕಾರಿನಲ್ಲಿ ಇಟ್ಟುಕೊಂಡು ಬಂದಿದ್ದು, ವೈಯಕ್ತಿಕ ಕೆಲಸದ ಹಿನ್ನೆಲೆ 1.80 ಲಕ್ಷ ರೂ. ಕಾರಿನಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನೇ ನೋಡಿಕೊಂಡಿದ್ದ ಕಳ್ಳ ಕಾರಿನ ಗ್ಲಾಸ್ ಒಡೆದು ಹಣ ಲಪಟಾಯಿಸಿದ್ದಾನೆ. ಕಳ್ಳನ ಈ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಣ ಕಳವು ಮಾಡುತ್ತಿದ್ದಂತೆ ಅಲ್ಲಿಯೇ ಇದ್ದ ಸ್ಥಳೀಯರು ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಕಳ್ಳ ಓಡಿ ಹೋಗಿದ್ದಾನೆ. ಸದ್ಯ ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.