ಬೆಳಗಾವಿಗೆ ಬಂದ ಹುತಾತ್ಮ ಯೋಧ ರಾಹುಲ ಸುಳಗೇಕರ ಪಾರ್ಥಿವ ಶರೀರ, ಗೌರವ ಸಲ್ಲಿಕೆ - ಲೆಟೆಸ್ಟ್ ಹುತಾತ್ಮ ಯೋಧ ರಾಹುಲ ಸುಳಗೇಕರ ನ್ಯೂಸ್
🎬 Watch Now: Feature Video
ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಹೋರಾಡಿ ಹುತಾತ್ಮನಾದ ವೀರಯೋಧ ರಾಹುಲ ಸುಳಗೇಕರ ಅವರ ಪಾರ್ಥಿವ ಶರೀರವನ್ನು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ಜಿಲ್ಲಾಡಳಿತ ಹಾಗೂ ಮರಾಠ ಲಘು ಪತಾತಿದಳದ ಸಿಬ್ಬಂದಿ ಪಾರ್ಥಿವ ಶರೀರ ಪಡೆದು ಗೌರವವಂದನೆ ಸಲ್ಲಿಸಿದರು. ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ, ಎಂಎಲ್ಐಆರ್ ಸಿ ಬ್ರಿಗೇಡಿಯರ್ ಗೋವಿಂದ ಕಾಲ್ವಾಡ್, ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಜಿಪಂ ಸಿಇಒ ರಾಜೇಂದ್ರ ಶವದ ಪೆಟ್ಟಿಗೆಗೆ ಹೂವಿನ ಹಾರ ಹಾಕಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರವನ್ನು ಸಾಂಬ್ರಾದಿಂದ ವಿಶೇಷ ವಾಹನದಲ್ಲಿ ಉಚಗಾಂವ ಗ್ರಾಮಕ್ಕೆ ಒಯ್ಯಲಾಯಿತು.
TAGGED:
latest belagavi news