ದೇಹವನ್ನೇ ಹಲಗೆಯನ್ನಾಗಿಸಿ ಚಿತ್ತಾರಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ವ್ಯಕ್ತಿ! - Mysuru suttur fair
🎬 Watch Now: Feature Video
ಮೈಸೂರು: ಸುತ್ತೂರು ಜಾತ್ರೆ 5ನೇ ದಿನಕ್ಕೆ ಕಾಲಿಟ್ಟಿದ್ದು, ವ್ಯಕ್ತಿಯೊಬ್ಬನು ತನ್ನ ದೇಹದ ಮೇಲೆ ಹೃದಯ ಮತ್ತು ರಕ್ತನಾಳಗಳ ಚಿತ್ರ ಬರೆಸಿಕೊಂಡು, ಮುಖಕ್ಕೆ ರಾಷ್ಟ್ರಧ್ವಜದ ಬಣ್ಣ ಬರೆದುಕೊಂಡು ಜಾಗೃತಿ ಮೂಡಿಸಿದ್ದಾನೆ. ದಾವಣಗೆರೆಯ ಶಿವಕುಮಾರ್ (50) ಎಂಬಾತ ಹೀಗೆ ಚಿತ್ರಗಳನ್ನು ಬಿಡಿಸಿಕೊಂಡು, ಮೈ ಮೇಲೆ ರಕ್ತದಾನ ಜೀವದಾನ ಎಂದು ಬರೆಸಿಕೊಂಡಿರುವ ವ್ಯಕ್ತಿ. ಅನೇಕರು ರಕ್ತದಾನಕ್ಕೆ ಮುಂದೆ ಬರುವುದಿಲ್ಲ. ನಾನು ಕಳೆದ 21 ವರ್ಷಗಳಿಂದಲೂ 70ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದೇನೆ. ನನಗೆ ರಕ್ತದಾನದಿಂದ ಯಾವ ತೊಂದರೆಯೂ ಆಗಿಲ್ಲ ಎಂದು ತನ್ನ ಅನಿಸಿಕೆ ಹಂಚಿಕೊಂಡರು.