ನಿಲ್ಲದ ವರುಣನ ಆರ್ಭಟ: ಬೆಳಗಾವಿಯಲ್ಲಿ ದೇವರ ಮೊರೆ ಹೋದ ಜನ - ಮಳೆ ನಿಲ್ಲಿಸುವಂತೆ ದೇವರಿಗೆ ಹೋಮ
🎬 Watch Now: Feature Video
ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಮಳೆ ನಿಲ್ಲಿಸುವಂತೆ ತಾಲೂಕಿನ ಸಂಗಮೇಶ್ವರ ನಗರದ ದೇವಸ್ಥಾನದಲ್ಲಿ ಹೋಮ ಮಾಡಿದ್ದು, ಮಳೆ ಕಡಿಮೆಯಾಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಹೋಮದಲ್ಲಿ ಬೆಳಗಾವಿಯ ಪುರೋಹಿತರು ಭಾಗಿಯಾಗಿದ್ದಾರೆ.