ಸಂಸದ ತೇಜಸ್ವಿ ಸೂರ್ಯರ ನೂತನ ಕಚೇರಿ ಉದ್ಘಾಟಿಸಿದ ಅಮಿತ್ ಶಾ.. - Chief Minister BS Yeddyurappa
🎬 Watch Now: Feature Video
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿಯ ಯುವ ಸಂಸದ ತೇಜಸ್ವಿ ಸೂರ್ಯರವರ ಜಯನಗರ 5ನೇ ಬ್ಲಾಕ್ನಲ್ಲಿರುವ ನೂತನ ಕಚೇರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ರಾಜ್ಯದ ಪ್ರವಾಸದಲ್ಲಿರುವ ಶಾ ಹುಬ್ಬಳ್ಳಿಗೆ ತೆರಳುವ ಮುನ್ನ ಕಚೇರಿ ಉದ್ಘಾಟನೆ ಮಾಡಿ ತೇಜಸ್ವಿ ಸೂರ್ಯ ಅವರಿಗೆ ಆಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್, ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ್ ನಾರಾಯಣ್ ಸೇರಿ ಹಲವು ಸಚಿವರು ಮತ್ತು ಶಾಸಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಮಿತ್ ಶಾ ಅವರು ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದು, ವಿದ್ಯಾಪೀಠದಲ್ಲಿರುವ ಪೇಜಾವರಶ್ರೀಗಳ ಬೃಂದಾವನಕ್ಕೆ ತೆರಳಿದರು.