ಗುಂಡಿ ಬಿದ್ದು ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ - ಹಾಸನ
🎬 Watch Now: Feature Video

ಹಾಸನ: ಅರಕಲಗೂಡು ತಾಲೂಕಿನ ಅಲ್ಲಾಪಟ್ಟಣದಲ್ಲಿ ಗುಂಡಿ ಬಿದ್ದು ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದ ರಸ್ತೆಗೆ ಗ್ರಾಮಸ್ಥರು ಮಂಗಳವಾರ ಭತ್ತದ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ರಸ್ತೆ ಹಾಳಾಗಿ ಹಲವು ವರ್ಷಗಳೇ ಕಳೆದರೂ ದುರಸ್ತಿಯಾಗಿಲ್ಲ. ಈ ಕುರಿತು ಕ್ಷೇತ್ರದ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಕಳೆದೊಂದು ತಿಂಗಳಿನಿಂದ ಮಳೆ ಬೀಳುತ್ತಿದ್ದು, ರಸ್ತೆ ಕೆಸರು ಗದ್ದೆಯಾಗಿ ಬದಲಾಗಿದೆ. ರಸ್ತೆಯಲ್ಲಿ ತಿರುಗಾಡಲು ಸಹ ಆಗುತ್ತಿಲ್ಲ. ತಮ್ಮೂರಿನ ಮೇಲೆ ಜನಪ್ರತಿನಿಧಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ರಸ್ತೆಗಳು ಹಾಳಾಗಿವೆ. ಹಾಗಾಗಿ ಕೆಸರಿನ ರಾಡಿ ಹರಡಿರುವ ರಸ್ತೆಗೆ ಭತ್ತದ ಪೈರುಗಳನ್ನು ನೆಟ್ಟು ಜನಪ್ರತಿನಿಧಿಗಳ ಗಮನ ಸೆಳೆಯಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.
Last Updated : Sep 12, 2019, 11:04 PM IST