ನರ್ಸಿಂಗ್ ಹೋಂಗೆ ಬಂದು ಚಿಕಿತ್ಸೆ ಪಡೆದುಕೊಂಡ ಕೋತಿ : ವಿಡಿಯೋ ವೈರಲ್ - The monkey came to the nursing home in karwar
🎬 Watch Now: Feature Video
ಕಾರವಾರ: ಗಾಯದ ನೋವು ತಾಳಲಾರದೆ ಕೋತಿಯೊಂದು ನರ್ಸಿಂಗ್ ಹೋಂಗೆ ಬಂದು ಚಿಕಿತ್ಸೆ ಪಡೆದುಕೊಂಡು ತೆರಳಿರುವ ವಿಚಿತ್ರ ಘಟನೆ ದಾಂಡೇಲಿಯಲ್ಲಿ ನಡೆದಿದೆ. ಇಲ್ಲಿನ ನರ್ಸಿಂಗ್ ಹೋಂಗೆ ಬಂದ ಕೋತಿ ಬೆನ್ನು ಉಜ್ಜಿಕೊಳ್ಳಲು ಆರಂಭಿಸಿದೆ. ಆದರೆ ಕೋತಿ ಕಂಡು ಹೆದರಿದ ನರ್ಸಿಂಗ್ ಹೋಂ ಸಿಬ್ಬಂದಿ ಕೋಲು ಹಿಡಿದು ಓಡಿಸಲು ಪ್ರಯತ್ನಿಸಿದರು. ಇಷ್ಟಾದರೂ ಬೆನ್ನು ಉಜ್ಜಿಕೊಳ್ಳುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಗಾಯಗೊಂಡ ಕೋತಿಗೆ ಚಿಕಿತ್ಸೆ ನೀಡಲು ಮುಂದಾದರು. ಕೋತಿಯನ್ನು ಎತ್ತಿಕೊಂಡು ಕಟ್ಟೆಯ ಮೇಲೆ ಕೂರಿಸಿ ಔಷಧಿ ಹಚ್ಚಿದರು. ಈ ವೇಳೆ ಕೋತಿ ಯಾರಿಗೂ ಏನು ಮಾಡದೇ ಸುಮ್ಮನೆ ಕುಳಿತು ಚಿಕಿತ್ಸೆಗೆ ಸ್ಪಂದಿಸಿತು. ಇದು ನೆರೆದವರ ಅಚ್ಚರಿಗೂ ಕಾರಣವಾಗಿತ್ತು. ಚಿಕಿತ್ಸೆ ಬಳಿಕ ಕೋತಿ ಅಲ್ಲಿಂದ ತೆರಳಿದ್ದು, ಇದೀಗ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.