ಕೊಪ್ಪಳ ಜಾತ್ರೆ: ಲಕ್ಷ ವೃಕ್ಷೋತ್ಸವ ಪರಿಕಲ್ಪನೆಯೊಂದಿಗೆ ಬೃಹತ್ ಜಾಗೃತಿ ಜಾಥಾ - ಕೊಪ್ಫಳ ಜಾಗೃತಿ ಜಾಥಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5621312-thumbnail-3x2-kpl.jpg)
ಕೊಪ್ಪಳದಲ್ಲಿ ಜಾತ್ರೆಯ ಸಂಭ್ರಮ ಮನೆಮಾಡಿದೆ. ಜಾತ್ರೆಯ ಸಂದರ್ಭದಲ್ಲಿ ಪ್ರತಿ ವರ್ಷ ಸಾಮಾಜಿಕ ಕಾಳಜಿ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ ಕೊಪ್ಪಳದ ಶ್ರೀ ಗವಿಮಠ ತನ್ನ ಸಾಮಾಜಿಕ ಹೊಣೆಗಾರಿಕೆ ಮೆರೆಯುತ್ತಿದೆ. ಅದರಂತೆ ಈ ವರ್ಷವೂ ಗವಿಮಠ ಸಸಿಗಳನ್ನು ನೆಡಲು ಹಾಗೂ ಗಿಡಮರಗಳನ್ನು ಸಂರಕ್ಷಿಸಲು ಲಕ್ಷ ವೃಕ್ಷೋತ್ಸವ ಎಂಬ ಪರಿಕಲ್ಪನೆಯೊಂದಿಗೆ ಇಂದು ಬೃಹತ್ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ನಗರದ ಸಾರ್ವಜನಿಕ ಮೈದಾನದಿಂದ ಪ್ರಾರಂಭವಾದ ಈ ಜಾಗೃತಿ ಜಾಥಾದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದಾರೆ. ಜಾಥಾ ಆರಂಭ ಪೂರ್ವದಲ್ಲಿ ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.