ನಾಳೆಯಿಂದ ಮೀನುಗಾರಿಕೆಗೆ ನಿಷೇಧ : ಮತ್ತಷ್ಟು ಸಂಕಷ್ಟದಲ್ಲಿ ಕಡಲ ಮಕ್ಕಳು - the fishing ban period start from Tomorrow news
🎬 Watch Now: Feature Video
ಕಾರವಾರ: ಕರಾವಳಿಯಲ್ಲಿ ನಾಳೆಯಿಂದ ಮೀನುಗಾರಿಕಾ ನಿಷೇಧದ ಅವಧಿ ಪ್ರಾರಂಭವಾಗಲಿದ್ದು, ಇನ್ನು ಒಂದೂವರೆ ತಿಂಗಳುಗಳ ಕಾಲ ಬೋಟ್ಗಳು ಲಂಗರು ಹಾಕಬೇಕಿದೆ. ಆದರೆ ಈ ಬಾರಿ ಹವಾಮಾನ ವೈಪರಿತ್ಯ ಹಾಗೂ ಕೊರೊನಾ ಅಟ್ಟಹಾಸದಿಂದಾಗಿ ವರ್ಷವಿಡಿ ಬಂದರಿನಲ್ಲಿದ್ದ ಮೀನುಗಾರರಿಗೆ ಸರ್ಕಾರ 14 ದಿನಗಳ ಕಾಲ ಮೀನುಗಾರಿಕೆ ವಿಸ್ತರಣೆ ಮಾಡಿ ಅವಕಾಶ ನೀಡಿತ್ತು. ದುರದೃಷ್ಟವಶಾತ್ ಈ ಅವಧಿಯೂ ಚಂಡಮಾರುತದ ಅಬ್ಬರದಿಂದಾಗಿ ಪ್ರಯೋಜನಕ್ಕೆ ಬಾರದಾಗಿದ್ದು, ಇದೀಗ ಸಂಕಷ್ಟದ ನಡುವೆಯೇ ಕಡಲ ಮಕ್ಕಳು ಸುದೀರ್ಘ ರಜೆಗೆ ತೆರಳಬೇಕಾದ ಅನಿವಾರ್ಯತೆ ಬಂದೊದಗಿದೆ.