ಪೊಲೀಸ್ ಪೆರೇಡ್ನಲ್ಲಿ ಹೆಜ್ಜೆ ಹಾಕಿದ ಶ್ವಾನ.. - ಪೊಲೀಸ್ ಪೆರೇಡ್
🎬 Watch Now: Feature Video

ಮಂಗಳೂರು: ನಗರದ ಪೊಲೀಸ್ ಮೈದಾನದಲ್ಲಿ ನಡೆದ ಪೆರೇಡ್ನಲ್ಲಿ ನಾಯಿಯೊಂದು ಭಾಗವಹಿಸಿ ಎಲ್ಲರಿಗೆ ಅಚ್ಚರಿ ಮೂಡಿಸಿತ್ತು. ಪೊಲೀಸ್ ಕವಾಯತು ಕಾರ್ಯಕ್ರಮ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆದಿತ್ತು. ಈ ಸಂದರ್ಭ ಅಲ್ಲಿರುವ ನಾಯಿಯೊಂದು ಪೊಲೀಸರೊಂದಿಗೆ ತರಬೇತಿ ನೀಡಲಾಗಿದೆ ಏನೋ ಎಂದು ಭಾಸವಾಗುವಂತೆ ಪೆರೇಡ್ನಲ್ಲಿ ಭಾಗವಹಿಸಿತ್ತು. ಇನ್ನು ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೇ ಪೊಲೀಸರು ಪೆರೇಡ್ ಮಾಡುತ್ತಿದ್ದರೆ, ನಾಯಿ ಮಾತ್ರ ಪೆರೇಡ್ ಆರಂಭದಿಂದಲೇ ಪೊಲೀಸರೊಂದಿಗೆ ಇಡೀ ಮೈದಾನದಲ್ಲಿ ಹೆಜ್ಜೆ ಹಾಕಿತ್ತು.