2025 Kawasaki Ninja ZX-4RR: ಬೈಕ್ ರೈಡರ್ಸ್ಗೆ ಗುಡ್ ನ್ಯೂಸ್. ಪ್ರೀಮಿಯಂ ಮೋಟಾರ್‌ಸೈಕಲ್ ತಯಾರಕ ಕವಾಸಕಿ ಇಂಡಿಯಾ ತನ್ನ 2025 ಕವಾಸಕಿ ನಿಂಜಾ ZX-4RR ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಬೈಕ್ ಅನ್ನು ಪರಿಚಯಿಸಿದ ನಂತರ ಕವಾಸಕಿ ತಕ್ಷಣವೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವುದು ಗಮನಾರ್ಹ. ಕಂಪನಿಯು ಈ ಬೈಕ್ ಅನ್ನು ಲೈಮ್ ಗ್ರೀನ್, ಎಬೋನಿ ಮತ್ತು ಬ್ಲಿಜಾರ್ಡ್ ವೈಟ್ ಎಂಬ ಮೂರು ಹೊಸ ಬಣ್ಣಗಳಲ್ಲಿ ಹೊರತಂದಿದೆ. ಈ ಪ್ರೀಮಿಯಂ ಬೈಕ್ನ ಬೆಲೆ ಮತ್ತು ಫೀಚರ್ಗಳ ಬಗ್ಗೆ ತಿಳಿಯೋಣಾ ಬನ್ನಿ..
ಎಂಜಿನ್: ಹೊಸ 2024 ಕವಾಸಕಿ ನಿಂಜಾ ZX-4RR ಅದೇ ಹಳೆಯ 399cc, ಲಿಕ್ವಿಡ್-ಕೂಲ್ಡ್, ಇನ್‌ಲೈನ್-ಫೋರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 14,500rpm ನಲ್ಲಿ 77bhp ಪವರ್ ಮತ್ತು 13,000rpm ನಲ್ಲಿ 39Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಪವರ್ 14,500 ಆರ್‌ಪಿಎಮ್‌ನಲ್ಲಿ 80 ಬಿಹೆಚ್‌ಪಿಗೆ ಹೈ ಆಗುತ್ತದೆ. ಗರಿಷ್ಠ ಟಾರ್ಕ್‌ಗಾಗಿ ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಸ್ಟೈಲಿಂಗ್: ನಾವು ಈ ಬೈಕ್ನ ಸ್ಟೈಲಿಂಗ್ ನೋಡಿದ್ರೆ, ಇದು ತೀಕ್ಷ್ಣವಾದ ಫೇರಿಂಗ್, ಟ್ವಿನ್-ಎಲ್ಇಡಿ ಹೆಡ್ಲೈಟ್ಗಳು, ಅಪ್-ಸ್ವೆಪ್ಟ್ ಟೈಲ್ನೊಂದಿಗೆ ಆಕ್ರಮಣಕಾರಿಯಾಗಿ ಕಾಣುತ್ತದೆ. ಬಾಡಿವರ್ಕ್ ಅಡಿಯಲ್ಲಿ ಹೆಚ್ಚಿನ ಕರ್ಷಕ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಇದೆ. ಇದರ ಸಸ್ಪೆನ್ಷನ್ USD ಫೋರ್ಕ್, ಬ್ಯಾಕ್-ಲಿಂಕ್ ಮೊನೊಶಾಕ್‌ನಿಂದ ಮಾಡಲ್ಪಟ್ಟಿದೆ.
ಇತರೆ ವೈಶಿಷ್ಟ್ಯಗಳು: ಈ ಬೈಕ್ 17 ಇಂಚಿನ ಅಲಾಯನ್ ವ್ಹೀಲ್ಗಳನ್ನು ಹೊಂದಿದೆ. ಬ್ರೇಕಿಂಗ್ಗಾಗಿ ಮುಂಭಾಗದಲ್ಲಿ 290 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಒದಗಿಸಲಾಗಿದೆ. ಈ ಹೊಸ 2024 ಕವಾಸಕಿ ನಿಂಜಾ ZX-4RR ಮೋಟಾರ್‌ಸೈಕಲ್ 189 ಕೆಜಿ ತೂಕವಿದ್ದು, 135 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಈ ಮೋಟಾರ್‌ಸೈಕಲ್ ಸ್ಪೋರ್ಟ್, ರೋಡ್, ರೇನ್ ಮತ್ತು ಕಸ್ಟಮ್ ಎಂಬ ನಾಲ್ಕು ರೈಡ್ ಮೋಡ್‌ಗಳನ್ನು ಹೊಂದಿದೆ. ಇದು ಟ್ರಾಕ್ಷನ್ ಕಂಟ್ರೋಲ್, ಡ್ಯುಯಲ್-ಚಾನೆಲ್ ABS ನೊಂದಿಗೆ ಬರುತ್ತದೆ. ಅಲ್ಲದೆ ಇದರ ಸೆಟ್ಟಿಂಗ್‌ಗಳನ್ನು ಕಲರ್ TFT ಡಿಸ್ಪ್ಲೇಯೊಂದಿಗೆ ಸರಿಹೊಂದಿಸಬಹುದು. 2025 ಕವಾಸಕಿ ನಿಂಜಾ ZX-4RR ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಬುಕಿಂಗ್ ಈಗಾಗಲೇ ಮಾರುಕಟ್ಟೆಯಲ್ಲಿ ಆರಂಭವಾಗಿದೆ.
ಈ ಬೈಕ್ ತನ್ನ ಹಿಂದಿನ ಮಾದರಿಗಿಂತ ರೂ. 32,000 ಹೆಚ್ಚು. ಆದರೆ ಈ ಹೊಸ ಕಲರ್ಗಳ ಆಯ್ಕೆಗಳನ್ನು ಹೊರತುಪಡಿಸಿ, ಹೊಸ ಬೈಕ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಕಂಪನಿಯು ಈ ಮೋಟಾರ್ ಸೈಕಲ್ನ ಆರಂಭಿಕ ಬೆಲೆ ಅಂದ್ರೆ ಎಕ್ಸ್ ಶೋ ರೂಂ ಬೆಲೆ ರೂ. 9.42 ಲಕ್ಷಕ್ಕೆ ನಿಗದಿಪಡಿಸಿದೆ.