ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಕರಡಿ ಪ್ರತ್ಯಕ್ಷ - ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಕರಡಿ ಪ್ರತ್ಯಕ್ಷ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10175239-thumbnail-3x2-lek.jpg)
ತುಮಕೂರು:ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಭೀತಿ ಮೂಡಿಸಿದೆ. ಇಂದು ಮುಂಜಾನೆ ಸುಮಾರು 4 ಗಂಟೆ ಸಮಯದಲ್ಲಿ ಮಠದ ಆವರಣದಲ್ಲಿ ಕಾಣಿಸಿಕೊಂಡ ಕರಡಿ ಹತ್ತು ನಿಮಿಷಗಳ ಕಾಲ ಅಲ್ಲಿಯೇ ಓಡಾಡಿದೆ. ಮಠದ ಪಕ್ಕದಲ್ಲಿರುವ ಬೆಟ್ಟದಿಂದ ಆಹಾರ ಹುಡುಕುತ್ತಾ ಬಂದಿದೆ ಎನ್ನಲಾಗಿದೆ. ಮುಂಜಾನೆ ಮಠದ ಸಿಬ್ಬಂದಿ ಕರಡಿ ಓಡಾಡುತ್ತಿರುವುದನ್ನು ಕಂಡು ಮೊಬೈಲ್ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ. ನಂತರ ಕರಡಿಯನ್ನು ಮಠದ ಆವರಣದಿಂದ ಹೊರಗೆ ಓಡಿಸುವ ಪ್ರಯತ್ನ ಮಾಡಿದ್ದಾರೆ.