ಧಾರಾಕಾರ ಮಳೆಗೆ ತಾತ್ಕಾಲಿಕ ಸೇತುವೆ ಬಂದ್: ರಸ್ತೆ ಸಂಚಾರ ಸ್ಥಗಿತ - Dharwad latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9248590-322-9248590-1603201293594.jpg)
ಧಾರವಾಡ : ಭಾರಿ ಮಳೆಗೆ ತಾಲೂಕಿನ ಹಾರೋಬೆಳವಡಿ ಗ್ರಾಮದ ಪಕ್ಕದಲ್ಲಿದ್ದ ತಾತ್ಕಾಲಿಕ ಸೇತುವೆ ಮೇಲೆ ನೀರು ತುಂಬಿಕೊಂಡಿದೆ. ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಸುರಿದ ಮಳೆಯ ಪ್ರವಾಹಕ್ಕೆ ಸೇತುವೆ ಹಾನಿಯಾಗಿತ್ತು. ಸೇತುವೆ ದುರಸ್ತಿ ಕಾರ್ಯ ನಡೆದಿದ್ದರಿಂದ ಅದರ ಪಕ್ಕದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಈಗ ಅದರ ಮೇಲಿಂದ ಹಳ್ಳದ ನೀರು ಹರಿದು ಹೋಗುತ್ತಿದೆ. ಪರಿಣಾಮ ಧಾರವಾಡ - ಸವದತ್ತಿ ರಸ್ತೆ ಸಂಚಾರ ಬಂದ್ ಆಗಿದೆ.