ಚಲಿಸುತ್ತಿದ್ದ ಲಾರಿಯಲ್ಲಿ ತಾಂತ್ರಿಕ ದೋಷ: ಹೊತ್ತಿ ಉರಿದ ಲಾರಿ - ಉತ್ತರ ಕನ್ನಡ ಜಿಲ್ಲೆ
🎬 Watch Now: Feature Video

ಚಲಿಸುತ್ತಿದ್ದ ಲಾರಿಯ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಮಟಾ ತಾಲೂಕಿನ ದೇವಿಮನೆ ಘಟ್ಟದ ಬಳಿ ನಡೆದಿದೆ. ಸಿಮೆಂಟ್ ತುಂಬಿದ ಲಾರಿ ಬಳ್ಳಾರಿಯಿಂದ ಶಿರಸಿ ಮಾರ್ಗವಾಗಿ ಭಟ್ಕಳಕ್ಕೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ದಾವಣಗೆರೆ ಮೂಲದ ಚಾಲಕ ಸುಬಾನ್ ಸೈಯದ್ ಸಾಬ್ ಅಹ್ಮದ್, ಕ್ಲೀನರ್ ಸಲೀಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.