ಪುರಾವೆ ಇಲ್ಲದೆ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಡಾ. ಸುದರ್ಶನ್ ಮನವಿ - Technical Advisory Committee Chairman Dr. Sudarshan
🎬 Watch Now: Feature Video
ಕೋವಿಡ್ ವ್ಯಾಕ್ಸಿನ್ ಬಗ್ಗೆ ಪುರಾವೆ ಇಲ್ಲದೆ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಸುದರ್ಶನ್ ಜನರಲ್ಲಿ ಮನವಿ ಮಾಡಿದ್ದಾರೆ. ಇಂದು 11-30ಕ್ಕೆ ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಂಡಿದ್ದೇನೆ. ಸರ್ಕಾರ ಹಾಗೂ ಸಂಶೋಧನಾ ನಿಯಮದಂತೆ ಅರ್ಧ ಗಂಟೆ ಪರಿವೀಕ್ಷಣೆ ಮುಗಿದಿದ್ದು, ಬಹಳ ಖುಷಿ ಇದೆ ಎಂದರು. ವೈರಾಲಜಿಸ್ಟ್ ಡಾ. ರವಿ ಮಾತನಾಡಿ, ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡ ಮೇಲೆ ಯಾವುದೇ ತೊಂದರೆ ಆಗಲಿಲ್ಲ. ಅಷ್ಟೇ ಯಾಕೆ ಸೂಜಿ ಚುಚ್ಚಿದ್ದು ಗೊತ್ತಾಗಲಿಲ್ಲ. ಲಸಿಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಯಾಕೆಂದರೆ ವ್ಯಾಕ್ಸಿನ್ ತಯಾರು ಮಾಡಿದ ವಿಧಾನ ಎಲ್ಲವೂ ಚೆನ್ನಾಗಿದೆ. ಅವಕಾಶ ಸಿಕ್ಕಾಗ ವ್ಯಾಕ್ಸಿನ್ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
Last Updated : Jan 16, 2021, 2:13 PM IST