ಸುರಪುರ: ಕೊರೊನಾ ನಿರ್ಮೂಲನೆ ಆಗಲೆಂದು ದಂಡಗುಂಡ ಬಸವಣ್ಣಗೆ ಪೂಜೆ - eradication of corona
🎬 Watch Now: Feature Video
ಸುರಪುರ (ಯಾದಗಿರಿ): ತಾಲೂಕಿನ ಜಾಲಿಬೆಂಚಿ ಗ್ರಾಮಸ್ಥರು ಕೊರೊನಾ ವೈರಸ್ ನಿರ್ಮೂಲನೆಗಾಗಿ ದಂಡಗುಂಡ ಬಸವಣ್ಣಗೆ ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ಅರ್ಚಕ ವೇದಮೂರ್ತಿ ಅಮರಯ್ಯ ಸ್ವಾಮಿ, ನಾಡಿನಲ್ಲಿ ಮಳೆ ಬಾರದಿರುವಾಗ ಈ ದಂಡಗುಂಡ ಬಸವಣ್ಣನ ದೇವಸ್ಥಾನಕ್ಕೆ ಪ್ರತಿ ಮನೆಯಿಂದ ಜನರು ಅಡುಗೆ ಮಾಡಿಕೊಂಡು ತಂದು ದೇವರಿಗೆ ನೈವೇದ್ಯ ಅರ್ಪಿಸುತ್ತಿದ್ದರು. ಸಂಜೆಯ ವೇಳೆಗೆ ಮಳೆ ಬರುತ್ತಿತ್ತು. ಇದು ಬಹುಕಾಲದಿಂದ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಈ ವರ್ಷ ನಾಡಿಗೆ ಮಳೆ ಬೆಳೆ ಚೆನ್ನಾಗಿ ಬರಲಿ ಜೊತೆಗೆ ಮಹಾಮಾರಿ ಕೊರೊನಾ ವೈರಸ್ ನಿರ್ಮೂಲನೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತಿದೆ ಎಂದರು.