ಭಾನುವಾರದ ಲಾಕ್ಡೌನ್: ವಿಜಯಪುರದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ - ವಿಜಯಪುರ
🎬 Watch Now: Feature Video

ಕೊರೊನಾ ಹರಡುವಿಕೆ ತಗ್ಗಿಸಲು ಜಿಲ್ಲಾಡಳಿತ ಕೈಗೊಂಡಿರುವ ಭಾನುವಾರ ಲಾಕ್ ಡೌನ್ಗೆ ವಿಜಯಪುರದಲ್ಲಿ ಈ ವಾರವೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಕೇಂದ್ರ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದೆ. ನಿನ್ನೆ ರಾತ್ರಿಯಿಂದಲೇ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೆರಳಣಿಕೆಯಷ್ಡು ಬಸ್ಗಳು ಬೆಳಗ್ಗೆ ಬಂದು ಹೋಗಿವೆ. ಅದನ್ನು ಹೊರತುಪಡಿಸಿ, ಬೇರೆ ಜಿಲ್ಲೆ, ಗ್ರಾಮೀಣ ಪ್ರದೇಶಗಳ ಬಸ್ ಸಂಚಾರ ಬಂದ್ ಮಾಡಲಾಗಿದೆ. ಸಿಟಿ ಬಸ್, ಅಟೋ ಸೇರಿ ನಗರದಲ್ಲಿ ಯಾವುದೇ ಸಂಚಾರ ವ್ಯವಸ್ಥೆ ಇಲ್ಲ.