ಮಂಗಳೂರಿನಲ್ಲಿ ಸಂಡೇ ಲಾಕ್ಡೌನ್: ಎರಡನೇ ವಾರವೂ ಯಶಸ್ವಿ
🎬 Watch Now: Feature Video
ಮಂಗಳೂರಿನಲ್ಲಿ ಭಾನುವಾರದ ಲಾಕ್ಡೌನ್ 2ನೇ ವಾರವೂ ಯಶಸ್ವಿಯಾಗಿದ್ದು, ಜನಸಂಚಾರ, ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಹಾಲು, ಮೆಡಿಕಲ್ ಹಾಗೂ ಪೆಟ್ರೋಲ್ ಬಂಕ್ಗಳು ಕಾರ್ಯಾಚರಿಸುತ್ತಿದ್ದು, ಉಳಿದಂತೆ ಮೀನು, ಮಾಂಸ, ತರಕಾರಿ, ಹಣ್ಣು, ದಿನಸಿ ಸಾಮಾಗ್ರಿಗಳ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಜನರು ಲಾಕ್ಡೌನ್ಗೆ ಉತ್ತಮವಾಗಿ ಸ್ಪಂದಿಸಿದ್ದು, ದಿನಸಿ ಸಾಮಾಗ್ರಿಗಳ ಗೂಡ್ಸ್ ಲಾರಿಗಳು, ಮಿನಿ ಲಾರಿಗಳು ಮಾತ್ರ ಅಲ್ಲಲ್ಲಿ ಸಂಚರಿಸುತ್ತಿವೆ. ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಅನಗತ್ಯ ಸಂಚರಿಸುವ ವಾಹನಗಳನ್ನು ತಡೆದು ಹಿಂದಕ್ಕೆ ಕಳುಹಿಸುತ್ತಿದ್ದಾರೆ.