ಸಂಡೇ ಲಾಕ್ಡೌನ್ಗೆ ಸಿಲಿಕಾನ್ ಸಿಟಿ ಮಂದಿ ಡೋಂಟ್ ಕೇರ್.. ರಸ್ತೆಗಿಳಿದ ವಾಹನಗಳು! - ಬೆಂಗಳೂರು ಕೊರೊನಾ ಲಾಕ್ ಡೌನ್
🎬 Watch Now: Feature Video

ಬೆಂಗಳೂರು : ಕೊರೊನಾ ನಿಯಂತ್ರಿಸುವ ಸಲುವಾಗಿ ಪ್ರತಿ ಭಾನುವಾರ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೆ, ಕಳೆದ ಭಾನುವಾರಕ್ಕೆ ಹೋಲಿಸಿದರೆ, ಈ ಭಾನುವಾರ ಸಿಲಿಕಾನ್ ಸಿಟಿ ಜನ ಲಾಕ್ ಡೌನ್ಗೆ ಅಷ್ಟೊಂದು ಪ್ರಾಶಸ್ತ್ಯ ಕೊಟ್ಟಂತಿಲ್ಲ. ಲಾಕ್ ಡೌನ್ ವೇಳೆ ವಿನಾಕಾರಣ ಓಡಾಟ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದರೂ, ಜನ ಮಾತ್ರ ಕ್ಯಾರೆ ಅನ್ನದೆ ಮುಂಜಾನೆಯೇ ರಸ್ತೆಗಿಳಿದಿದ್ದಾರೆ.