ಹೆಮ್ಮನಹಳ್ಳಿ ಚೌಡೇಶ್ವರಿ ಆಲಯದಲ್ಲಿ ನಿಖಿಲ್ - ಸುಮಲತಾ..!! - etv bharat
🎬 Watch Now: Feature Video
ಮಂಡ್ಯ: ಶಕ್ತಿ ದೇವತೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಚೌಡೇಶ್ವರಿ ದೇವಾಲಯಕ್ಕೆ ಲೋಕಸಭೆ ಚುನಾವಣೆ ಅಭ್ಯರ್ಥಿಗಳಾದ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವರ್ಷಕ್ಕೆ ಒಂದು ದಿನ ಮಾತ್ರ ದರ್ಶನ ನೀಡುವ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪೂಜೆಯ ನಂತರ ನಿಖಿಲ್ ಕೆ. ಆರ್. ನಗರದ ಕಡೆ ಹೊರಟರು. ಇನ್ನು ಸುಮಲತಾ ಅಂಬರೀಶ್ ಹೆಮ್ಮನಹಳ್ಳಿ, ಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ಪ್ರಚಾರದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.