ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಬೆಂಕಿ : ಲಕ್ಷಾಂತರ ರೂ ನಷ್ಟ - Lorry fires in Bachaniki at mundagodu
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9742994-thumbnail-3x2-sanju.jpg)
ಶಿರಸಿ : ಕಬ್ಬು ತುಂಬಿದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಬ್ಬು ಸಮೇತ ಲಾರಿ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಬಾಚಣಕಿ ಗ್ರಾಮದಲ್ಲಿ ನಡೆದಿದೆ. ಬರಮಣ್ಣ ಎಗ್ಗಪ್ಪನವರ್ ಎಂಬ ರೈತನ ತೋಟದಿಂದ ಕಬ್ಬು ಸಾಗಾಟಕ್ಕೆ ಬಂದಿದ್ದ ಲಾರಿ ಇದಾಗಿದ್ದು, ಮುಂಡಗೋಡಿ ನಿಂದ ಹಳಿಯಾಳ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತಿದ್ದ ವೇಳೆ ಬೆಂಕಿ ತಗಲಿದೆ. ಘಟನೆಯಿಂದ ಲಕ್ಷಾಂತರ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.