ಕೋವಿಡ್ ನಿರ್ಮೂಲನೆಗೆ ದುರ್ಗಾ ಚನ್ನಕೇಶವ ದೇಗುಲದಲ್ಲಿ ಸುದರ್ಶನ ಹೋಮ - Sudarshana Homa
🎬 Watch Now: Feature Video
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅರಳ ಬರಗೂರು ಸಮೀಪದ ಚೌಡೇನಹಳ್ಳಿ ದುರ್ಗಾಚನ್ನಕೇಶವ ದೇವಾಲಯದಲ್ಲಿ ರಾಮಾನುಜಾಚಾರ್ಯರ ಜಯಂತಿ ಹಾಗೂ ಕೋವಿಡ್ ನಾಶಕ್ಕಾಗಿ ಕೊರೊನಾ ನಿರ್ಮೂಲನಾ ಸುದರ್ಶನ ಹೋಮ ನಡೆಸಲಾಯಿತು. ಈ ವೇಳೆ ಮಾತನಾಡಿದ ಹಾಸನ ಜಿಲ್ಲಾ ವೈಷ್ಣವ ಸಭಾದ ಜಿಲ್ಲಾಧ್ಯಕ್ಷ ಪುಟ್ಟಣ್ಣಯ್ಯ, ಸರ್ವ ಧರ್ಮದವರಿಗೂ ದೀಕ್ಷೆ ಕೊಟ್ಟು ವೈಷ್ಣವ ಧರ್ಮಕ್ಕೆ ಬರಮಾಡಿಕೊಂಡು ಸಮಾಜೋದ್ಧಾರಕನಾಗಿ ಜೀವಿಸಿದವರು ರಾಮಾನುಜಾಚಾರ್ಯರು. ಇವರ ಅನುಯಾಯಿಗಳಾಗಿರುವ ನಾವುಗಳೇ ನಿಜಕ್ಕೂ ಧನ್ಯರು ಎಂದರು.