ಕೋಳಿಗಳನ್ನು ಕದಿಯುತ್ತಿದ್ದ ಬೀದಿ ನಾಯಿಗಳು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - CCTV captured

🎬 Watch Now: Feature Video

thumbnail

By

Published : Dec 23, 2020, 3:47 PM IST

ಕುಷ್ಟಗಿ(ಕೊಪ್ಪಳ): ಸಾಕಿದ ಜವಾರಿ ಕೋಳಿಗಳನ್ನು ಕಳ್ಳರು ಕದಿಯುವುದು ಸಾಮಾನ್ಯ. ಇದೀಗ ನಾಯಿಗಳು ಸಹ ಕೋಳಿಗಳನ್ನು ಕದಿಯುತ್ತವೆ. ಈ ಘಟನೆ ಕುಷ್ಟಗಿಯಲ್ಲಿ ನಡೆದಿದೆ. ಪಟ್ಟಣದ 14ನೇ ವಾರ್ಡ್​ ವ್ಯಾಪ್ತಿಯ ಪಾಂಡುರಂಗ ಕಟ್ಟಿಮನಿ ಎಂಬುವರ ಮನೆಯಲ್ಲಿ ಇದ್ದಕ್ಕಿದ್ದಂತೆ ಕೋಳಿಗಳು ಮಾಯವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಮನೆ ಹೊರ ಆವರಣದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ, ನಾಯಿಗಳು ಕೋಳಿಗಳನ್ನು ಕದಿಯದಂತೆ ಬುಟ್ಟಿ ಮೇಲೆ ಕುರ್ಚಿ ಇಟ್ಟಿದ್ದರು. ಆದರೆ ನಿನ್ನೆ ರಾತ್ರಿ ಬಂದಿದ್ದ ನಾಯಿಯೊಂದು ಕೋಳಿಯನ್ನು ಎತ್ತಿಕೊಂಡು ಹೋಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಯಿಗಳ ಉಪಟಳ ಹೆಚ್ಚಾಗಿದ್ದು, ಕೂಡಲೇ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಪಾಂಡುರಂಗ ಕಟ್ಟಿಮನಿ ಒತ್ತಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.