ಅಂಗಡಿ ಕಳ್ಳತನಕ್ಕೆ ಬಂದ ಕಳ್ಳರಿಂದ ಟೀ ಕಾಯಿಸುವ ಯತ್ನ... ಸಿಸಿವಿವಿಯಲ್ಲಿ ವಿಡಿಯೋ - ಅಂಗಡಿ ಕಳ್ಳತನ ಸುದ್ದಿ
🎬 Watch Now: Feature Video
ನೆಲಮಂಗಲ: : ಕಾಂಡಿಮೆಂಟ್ಸ್ ಅಂಗಡಿಯಲ್ಲಿ 4,500 ರೂಪಾಯಿ ಹಣ ಕದ್ದ ಕಳ್ಳರು ತದನಂತರ ಟೀ ಕಾಯಿಸಲು ಯತ್ನಿಸಿರುವ ಘಟನೆ ನಡೆದಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಜನವರಿ 18 ರಂದು ಕಡಬಗೆರೆ ಕ್ರಾಸ್ ಬಳಿಯ ಬ್ರಾಹ್ಮಿ ಕಾಂಡಿಮೆಂಟ್ಸ್ಗೆ ಬೆಳಗಿನ ಜಾವ 3:30ರ ವೇಳೆ ಅಂಗಡಿ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕ್ಯಾಶ್ ಬಾಕ್ಸ್ನಲ್ಲಿದ್ದ 4500 ರೂ ಹಣ, ಎಟಿಎಂ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಕಳ್ಳತನ ಮಾಡಿದ್ದಾರೆ. ಇದಾದ ಬಳಿಕ ಟೀ ಅಂಗಡಿಯಲ್ಲಿದ್ದ ಸ್ಟೌವ್ ಮೇಲೆ ಟೀ ಕಾಯಿಸಲು ಮುಂದಾಗಿದ್ದಾರೆ. ಆದರೆ ಆದರೆ ಅಂಗಡಿ ಮಾಲೀಕ ಸಿಲಿಂಡರ್ ಕನೆಕ್ಷನ್ ತೆಗೆದಿರುವ ಕಾರಣ ಇದು ಸಾಧ್ಯವಾಗಿಲ್ಲ. ಅಂಗಡಿ ಮಾಲೀಕ ಉದಯ್ ಶೆಟ್ಟಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.