ಲಸಿಕೆ ಪಡೆಯಲು ಹಿಂದೇಟು ಹಾಕಿದ ಸ್ಟಾಫ್ ನರ್ಸ್: ಧೈರ್ಯ ತುಂಬಿದ ಸಚಿವ ಶ್ರೀರಾಮುಲು
🎬 Watch Now: Feature Video
ಚಿತ್ರದುರ್ಗ: ನಗರದ ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಕೊವ್ಯಾಕ್ಸಿನ್ ನೀಡುವ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು ಚಾಲನೆ ನೀಡಿದ್ದು, ಈ ವೇಳೆ ಸ್ಟಾಫ್ ನರ್ಸ್ ಒಬ್ಬರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಈ ವಿಚಾರ ಗಮನಿಸಿದ ಸಚಿವರು, 'ನೀನೆ ಹೀಗೆ ಹೇಳಿದರೆ ಹೇಗಮ್ಮಾ', ಈ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ ಎಂದು ಆಕೆಯ ಮನವೊಲಿಸಿದರು. ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಇಂದು 100 ಜನರಿಗೆ ಕೊರೊನಾ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲು ಲಸಿಕೆ ಹಾಕಿಸಿಕೊಂಡ ಜಿಲ್ಲಾಸ್ಪತ್ರೆ ಡಿ - ಗ್ರೂಪ್ ಸಿಬ್ಬಂದಿ ಅಜಯಕುಮಾರ್ ಹಾಗೂ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದ ಸ್ಟಾಫ್ ನರ್ಸ್ ಚಿಕ್ಕಮ್ಮರಿಗೆ, ಸಚಿವ ಶ್ರೀರಾಮುಲು ಶಾಲು ಹೊದಿಸಿ ಗೌರವಿಸಿದರು.