ಧಗಧಗನೇ ಹೊತ್ತಿ ಉರಿದ ಸೋಯಾಬಿನ್ ಬಣವೆ, ಕಿಡಿಗೇಡಿಗಳ ಕೃತ್ಯ ಶಂಕೆ - ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ
🎬 Watch Now: Feature Video
ಹಾವೇರಿ: ಜಮೀನಿನಲ್ಲಿ ಕಟಾವು ಮಾಡಿ ರಾಶಿ ಮಾಡಲು ಹಾಕಿದ್ದ ಸೋಯಾಬಿನ್ ಬಣವೆ ಧಗಧಗನೆ ಹೊತ್ತಿ ಉರಿದ ಘಟನೆ ಹಾವೇರಿಯ ಸವಣೂರು ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ರುದ್ರಗೌಡ ಪಾಟೀಲ ಅವರು 5 ಎಕರೆ ಜಮೀನಿನಲ್ಲಿ ಸೋಯಾಬಿನ್ ಬೆಳೆದಿದ್ರು. ಕಳೆದ ಕೆಲವು ದಿನಗಳ ಹಿಂದಷ್ಟೇ ಬೆಳೆಯನ್ನ ಕಟಾವು ಮಾಡಿ ರಾಶಿ ಮಾಡಲು ಬಣವೆ ಹಾಕಿದ್ರು. ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಯಾರೋ ಕಿಡಿಗೇಡಿಗಳು ಬಣವೆಗೆ ಬೆಂಕಿ ಹಚ್ಚಿದ್ದಾರೆ ಅಂತಾ ರೈತ ಶಂಕೆ ವ್ಯಕ್ತಪಡಿಸಿದ್ದಾರೆ. ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.