ಅದ್ಧೂರಿಯಾಗಿ ನಡೆದ ಕೇಸೂರು ದೋಟಿಹಾಳ ಗ್ರಾಮದ ಶ್ರೀ ವೀರಭದ್ರ ದೇವರ ಜಾತ್ರೆ - ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರು
🎬 Watch Now: Feature Video
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರು ದೋಟಿಹಾಳ ಗ್ರಾಮದ ಶ್ರೀ ವೀರಭದ್ರ ದೇವರ ಜಾತ್ರಾ ಮಹೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಅದ್ಧೂರಿಯಾಗಿ ನೆರವೇರಿತು. ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಶ್ರೀ ವೀರಭದ್ರ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಗಂಗಸ್ಥಳಕ್ಕೆ ಹೋಗಿ ಬಂದ ಬಳಿಕ ದೇವಸ್ಥಾನದ ಬಳಿ ಅಗ್ನಿಕುಂಡ ನಡೆಯಿತು. ಪುರವಂತರು ಸೇರಿದಂತೆ ಅನೇಕ ಭಕ್ತರು ಅಗ್ನಿಕುಂಡ ಹಾಯ್ದು ಶಸ್ತ್ರ ಹಾಕಿಸಿಕೊಂಡು ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಿದರು.