ಗಣಪತಿ ಹಬ್ಬ.. ಗಜಪಡೆ ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡದ ಆನೆಗಳಿಗೆ ವಿಶೇಷ ಪೂಜೆ.. - captain Arjuna team elephants
🎬 Watch Now: Feature Video
ಮೈಸೂರು:ಗಣಪತಿ ಹಬ್ಬಕ್ಕೆ ಗಣಪತಿ ಸ್ವರೂಪವಾದ ಗಜಪಡೆ ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡದ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಸ್ಥಾನದ ಮುಂಭಾಗ ಕ್ಯಾಪ್ಟನ್ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷಿ, ಧನಂಜಯ,ಈಶ್ವರ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಹಣೆ, ಸೊಂಡಿಲು, ಕಾಲು, ದಂತಗಳಿಗೆ ಅರಿಶಿನ ಕುಂಕುಮ ಹಾಕಿ ಮಂತ್ರಾಕ್ಷತೆ ಮೂಲಕ ಅರ್ಚಕರಾದ ಪ್ರಹ್ಲಾದ್ ರಾವ್ ಅವರು ಪೂಜೆ ನೆರವೇರಿಸಿದರು.