ಕಾರ್ತಿಕ ಸೋಮವಾರದ ಪ್ರಯುಕ್ತ ಕಾಡುಮಲ್ಲೇಶ್ವರ ದೇಗುಲದಲ್ಲಿ ವಿಶೇಷ ಪೂಜೆ - ಕಾರ್ತಿಕ ಮಾಸದಲ್ಲಿ ಬರುವ ಪ್ರತೀ ಸೋಮವಾರದಂದು ನಗರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

🎬 Watch Now: Feature Video

thumbnail

By

Published : Nov 16, 2020, 7:50 PM IST

ಬೆಂಗಳೂರು: ಕಾರ್ತಿಕ ಮಾಸದಲ್ಲಿ ಬರುವ ಪ್ರತೀ ಸೋಮವಾರದಂದು ನಗರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತೆ. ಈ ದೇಗುಲದಲ್ಲಿ ಕಾರ್ತಿಕ ಸೋಮವಾರದಂದು ಸಹಸ್ರಾರು ಭಕ್ತಾದಿಗಳು ದೀಪವನ್ನು ಬೆಳಗುವ ಮೂಲಕ ದೇವರಿಗೆ ನಮನ ಸಲ್ಲಿಸುತ್ತಾರೆ. ಆದ್ರೆ ಈ ಬಾರಿ ಕೊರೊನಾ ಇರುವುದರಿಂದ ಭಕ್ತಾದಿಗಳಿಗೆ ದೇವಾಲಯದಲ್ಲಿ ದೀಪ ಬೆಳಗಲು ಅವಕಾಶ ನೀಡಲಾಗಲಿಲ್ಲ. ಕಾರ್ತಿಕ ಮಾಸದ ಸೋಮವಾರದ ದಿನದಂದು ಪರಮೇಶ್ವರನು ಸ್ವರ್ಗವನ್ನು ನಾಶ ಮಾಡಲು ಯತ್ನಿಸಿದ ತ್ರಿಪುರಾಸುರರನ್ನು ಸಂಹಾರ ಮಾಡುತ್ತಾನೆ. ಹೀಗಾಗಿ ಹಿಂದೂ ಧರ್ಮದಲ್ಲಿ ಈ ದಿನವನ್ನು ಭಕ್ತರು ಶಿವನ ದೇವಾಲಯಗಳಿಗೆ ಹೋಗಿ ದೀಪಗಳನ್ನು ಬೆಳಗುವ ಮೂಲಕ ಈ ದಿನವನ್ನು ಆಚರಿಸಲಾಗುತ್ತೆ. ಇನ್ನು ಈ ಮಾಸದ ವಿಶೇಷತೆಗಳನ್ನ ಕಾಡು ಮಲ್ಲೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಗಂಗಾಧರ್ ದೀಕ್ಷಿತ್ ತಿಳಿಸಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.