ಹರಪನಹಳ್ಳಿಯ ವೀರಭದ್ರೇಶ್ವರ ಗುಗ್ಗಳ: ಅಗ್ನಿ ಕುಂಡ ತುಳಿದು ಬಹುಪರಾಕ್ ಎಂದ ಭಕ್ತರು - ಲೆಟೆಸ್ಟ್ ಬಳ್ಳಾರಿ ದೇವಾಲಯದ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5069265-thumbnail-3x2-blry.jpg)
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹಳೆ ಬಸ್ ನಿಲ್ದಾಣ ಸಮೀಪದ ವೀರಭದ್ರೇಶ್ವರ ದೇಗುಲದ ಆವರಣದಲ್ಲಿ ನಡೆದ ಅಗ್ನಿ ಕುಂಡದಲ್ಲಿ ಭಕ್ತರು ತಮ್ಮ ಭಕ್ತಿ ಮೆರೆದು ಸಂಭ್ರಮಿಸಿದರು. ಮೇಗಳ ಪೇಟೆಯ ಗುಗ್ಗಳ ವೀರಭದ್ರೇಶ್ವರ ದೇಗುಲದಿಂದ ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರ ದೇವರ ಉತ್ಸವ ಮೂರ್ತಿಯನ್ನು ನಂದಿಕೋಲು, ಸಮಾಳ ಸೇರಿ ಸಕಲ ವಾದ್ಯಮೇಳದೊಂದಿಗೆ ಹಳೆ ಬಸ್ ನಿಲ್ದಾಣದ ವೀರಭದ್ರೇಶ್ವರ ದೇಗುಲದವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ಬಳಿಕ, ನೂರಾರು ಭಕ್ತರು ಸಾಲಾಗಿ ಬಂದು ಅಗ್ನಿ ಕುಂಡದಲ್ಲಿ ಹಾದು ಹೋಗಿ ದೇವರಿಗೆ ತಮ್ಮ ಭಕ್ತಿ ಸಮರ್ಪಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಭಕ್ತರು ಅಗ್ನಿಕುಂಡ ಹಾಯ್ದಿದ್ದು, ವೀರಣ್ಣ ದೊರೆಯೇ ನಿನಗ್ಯಾರು ಸರಿಯೇ, ಸರಿಸರಿ ಅಂದವರ ಹಲ್ಲು ಮುರಿಯೇ ಬಹುಪಾರಾಕ್ ಎಂದು ಭಕ್ತರು ಘೋಷವಾಕ್ಯ ಮೊಳಗಿತು. ಇನ್ನು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶೆ ಉಂಡಿ ಮಂಜುಳಾ, ಮುಖಂಡರಾದ ಶಶಿಧರ ಪೂಜಾರ, ಪಾಟೀಲ್ ಬೆಟ್ಟನಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.