ಚಂದ್ರನ ಅಂಗಳದಲ್ಲಿ ಮನೆ ನಿರ್ಮಾಣಕ್ಕೆ ಇಟ್ಟಿಗೆ ಕಂಡುಹಿಡಿದ ಬೆಂಗಳೂರು IISC...! - ಚಂದ್ರಲೋಕಕ್ಕೆ ಇಟ್ಟಿಗೆ ಸುದ್ದಿ

🎬 Watch Now: Feature Video

thumbnail

By

Published : Feb 3, 2020, 8:30 PM IST

Updated : Feb 3, 2020, 9:26 PM IST

ಚಂದ್ರನ ಅಂಗಳದಲ್ಲಿ ಮನೆ ನಿರ್ಮಾಣ ಮಾಡಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಇಸ್ರೋ ಸಹಭಾಗಿತ್ವದಲ್ಲಿ ಇಟ್ಟಿಗೆಯನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಅಲೋಕ್ ಕುಮಾರ್ ಈ ಕಲ್ಪನೆ ಹಾಗೂ ನಿರ್ವಹಣೆ ಮಾಡಿದ್ದು, ಇಸ್ರೋ ಹಾಗೂ IISC ಯ ಒಟ್ಟು 10 ವಿಜ್ಞಾನಿಗಳು ಇದರಲ್ಲಿ ಕೈಜೋಡಿದ್ದಾರೆ. ಸ್ಪೇಸ್ ಬ್ರಿಕ್ಸ್, ಹೆಸರೇ ಹೇಳುವಂತೆ ಬೇರೆ ಗ್ರಹದಲ್ಲಿ ಈ ಇಟ್ಟಿಗೆ ಸಹಾಯದಿಂದ ಮನೆ ನಿರ್ಮಾಣ ಮಾಡಬಹುದು. ಇದರ ವಿಶೇಷತೆ ಅಂದ್ರೆ ಒಂದು ಇಟ್ಟಿಗೆಯಿಂದ ಮತ್ತೊಂದು ಇಟ್ಟಿಗೆ ಸಿಮೆಂಟ್ ಬದಲು ಬ್ಯಾಕ್ಟೀರಿಯಾ ಸಹಾಯದಿಂದ ಹಿಡಿದುಕೊಂಡಿರುತ್ತವೆ. ಇಷ್ಟೇ ಅಲ್ಲದೆ ಈ ಇಟ್ಟಿಗೆಗಳನ್ನು ಭೂಮಿಯಿಂದ ಸಾಗಿಸಬೇಕು ಎಂದು ಏನೂ ಇಲ್ಲ, ಚಂದ್ರನ ಅಂಗಳದಲ್ಲೇ ಇದನ್ನು ತಯಾರಿಸಬಹುದು ಎಂದು ಅಲೋಕ್ ಕುಮಾರ್ ಹೇಳುತ್ತಾರೆ. ಸ್ಪೇಸ್ ಬ್ರಿಕ್ಸ್ ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಅಲೋಕ್​ ಕುಮಾರ್​ ಅವರು ಈಟಿವಿ ಭಾರತಕ್ಕೆ ನೀಡಿರುವ ಈ ವಿಶೇಷ ಸಂದರ್ಶನವನ್ನು ನೋಡಿ.
Last Updated : Feb 3, 2020, 9:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.