ಸವದತ್ತಿಯ ಸೊಗಲ ಸೋಮೇಶ್ವರನಿಗೂ ಜಲದಿಗ್ಬಂಧನ: ದರ್ಶನಕ್ಕೆ ಬಂದಿದ್ದ ಭಕ್ತರ ಪರದಾಟ - Someswara Temple surrounded by water
🎬 Watch Now: Feature Video
ಬೆಳಗಾವಿ: ಕುಂಭದ್ರೋಣ ಮಳೆಗೆ ಜಿಲ್ಲೆಯ ಸವದತ್ತಿ ತಾಲೂಕಿನ ಸೊಗಲ ಸೋಮೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಸವದತ್ತಿ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಸೊಗಲ ಗ್ರಾಮದ ಸೋಮೇಶ್ವರ ದೇವಸ್ಥಾನ ಜಲವೃತಗೊಂಡಿದೆ. ದೇವರ ದರ್ಶನಕ್ಕೆ ಭಕ್ತರು ಬಂದಾಗ ಏಕಾಏಕಿ ಮಳೆಯಾಗಿದೆ. 2-3 ಗಂಟೆಗಳ ಕಾಲ ಸುರಿದ ಮಳೆಯಿಂದ ದೇವಸ್ಥಾನ ಜಲಾವೃತಗೊಂಡಿದೆ. ಪರಿಣಾಮ ಸೋಮೇಶ್ವರನ ದರ್ಶನಕ್ಕೆ ಬಂದಿದ್ದ ಭಕ್ತರು ದೇವಸ್ಥಾನ ಆವರಣದಿಂದ ಹೊರಬರಲು ಪರದಾಡುವಂತಾಯಿತು. ನೀರಿನಲ್ಲಿ ದಾಟಲಾಗದೇ ಭಕ್ತರು ಸಂಕಷ್ಟ ಅನುಭವಿಸಿದರು. ಬಳಿಕ ಸ್ಥಳೀಯರೇ ಹಗ್ಗದ ಸಹಾಯದಿಂದ ಭಕ್ತರನ್ನು ಹಾಗೂ ಪೂಜಾರಿಗಳನ್ನು ರಕ್ಷಿಸಿದರು.