ಸದ್ದು ಗದ್ದಲವಿಲ್ಲದೇ ಬೈಕ್ ಸೀಟ್ ಏರಿ ಕುಳಿತಿದ್ದ ನಾಗಣ್ಣ... ಮುಂದೇನಾಯ್ತು? - Snake found in bike in gangavati
🎬 Watch Now: Feature Video
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಬೈಕ್‌ನ ಸೀಟಿನ ಕೆಳಭಾಗದಲ್ಲಿ ಸೇರಿಕೊಂಡಿದ್ದ ಹಾವೊಂದನ್ನು ರಕ್ಷಣೆ ಮಾಡಲಾಗಿದೆ. ವಡ್ಡರಹಟ್ಟಿ ಗ್ರಾಮದ ಶ್ರೀನಿವಾಸ್ ಎಂಬುವರ ಬೈಕನಲ್ಲಿ ಹಾವೊಂದು ಸೇರಿಕೊಂಡು ಆತಂಕ ಸೃಷ್ಟಿಸಿತ್ತು. ಸ್ಥಳೀಯರೊಬ್ಬರು ಬೈಕ್‌ನ ಸೀಟ್ ತೆಗೆದು ಹಾವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹೊರತೆಗೆದರು. ಬಳಿಕ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.