ಗೆಸ್ಟ್ಹೌಸ್ನಲ್ಲಿ ವಾಸವಿದ್ದ 6 ಅಡಿ ಉದ್ದದ ನಾಗಪ್ಪ - ಮನೆಯೊಳಗೆ ಹಲವು ದಿನಗಳಿಂದ ವಾಸವಾಗಿದ್ದ ಬರೋಬ್ಬರಿ 6 ಅಡಿ ಉದ್ದದ ನಾಗರಹಾವು
🎬 Watch Now: Feature Video
ಚಾಮರಾಜನಗರ: ಮನೆಯೊಳಗೆ ಹಲವು ದಿನಗಳಿಂದ ವಾಸವಾಗಿದ್ದ ಬರೋಬ್ಬರಿ 6 ಅಡಿ ಉದ್ದದ ನಾಗರಹಾವನ್ನು ಸೆರೆಹಿಡಿದು ಕಾಡಿಗೆ ಬಿಡಲಾಗಿದೆ. ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದ ರವಿಬಾಬು ಎಂಬವರ ಸಾಯಿ ಫಾರಂ ಗೆಸ್ಟ್ ಹೌಸ್ನಲ್ಲಿ ಹಾವು ಸೇರಿಕೊಂಡಿತ್ತು. ಉರಗತಜ್ಞ ಸಂತೇಮರಹಳ್ಳಿ ಮಹೇಶ್ ಸ್ಥಳಕ್ಕಾಗಮಿಸಿ ನಾಲ್ಕೂವರೆ ಗಂಟೆ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.