ಅಡುಗೆ ಕೋಣೆಗೆ ಬಂದು ಸದ್ದಿಲ್ಲದೆ ಕುಳಿತ ನಾಗಣ್ಣ: ಮುಂದೇನಾಯ್ತು ನೋಡ್ರಣ್ಣ - ಚಿಕ್ಕಮಗಳೂರಿನಲ್ಲಿ ಉರಗತಜ್ಞರಿಂದ ಹಾವಿನ ರಕ್ಷಣೆ
🎬 Watch Now: Feature Video
ಚಿಕ್ಕಮಗಳೂರು: ಮನೆಯೊಂದರಲ್ಲಿ ಸುಮಾರು 5 ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡು ಕುಟುಂಬಸ್ಥರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದ ಘಟನೆ ನಗರದಲ್ಲಿ ನಡೆದಿದೆ. ತಾಲೂಕಿನ ಬೀಳೆಕಲ್ಲಹಳ್ಳಿಯ ಮಂಜುನಾಥ್ ಎಂಬುವರ ಅಡುಗೆ ಮನೆಯಲ್ಲಿ ಈ ಬೃಹತ್ ಗಾತ್ರದ ನಾಗರಹಾವು ಕಾಣಿಸಿಕೊಂಡಿತ್ತು. ಮನೆಯ ಸದಸ್ಯರು ಅಡುಗೆ ಕೋಣೆಗೆ ಹೋದಾಗ ಹಾವು ಪತ್ತೆಯಾಗಿದ್ದು, ಅದನ್ನು ನೋಡಿದ ಕೂಡಲೇ ಕಿರುಚುತ್ತ ಹೊರಗೆ ಬಂದಿದ್ದಾರೆ. ಬಳಿಕ ಉರಗ ತಜ್ಞ ಸ್ನೇಕ್ ನರೇಶ್ ಅವರನ್ನು ಸ್ಥಳಕ್ಕೇ ಕರೆಸಿದ್ದಾರೆ. ಉರಗ ತಜ್ಞ ಈ ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮತ್ತಾವರ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.