ಲಾಕ್ಡೌನ್ನಿಂದ ಮಕ್ಕಳಿಗೂ ಸಂಕಷ್ಟ.. ಔಷಧಿ ಸಿಗದೆ ಬಾಲಕಿಯ ತೊಳಲಾಟ - tumkuru
🎬 Watch Now: Feature Video
ಕೊರೊನಾ ಲಾಕ್ಡೌನ್ನಿಂದ ಔಷಧಿ ಸಿಗದೆ ತೀವ್ರ ತೊಂದರೆಯಾಗಿದ್ದು ಸಹಾಯ ಮಾಡುವಂತೆ ಬಾಲಕಿಯೊಬ್ಬಳು ಮನವಿ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ನಡೆದಿದೆ. ಕಳೆದ 2 ವರ್ಷಗಳಿಂದ ಹಾರ್ಮೋನ್ ಸಮಸ್ಯೆಯಿಂದ ಈ ಬಾಲಕಿ ಬಳಲುತ್ತಿದ್ದಾಳೆ. ಪ್ರತಿ ದಿನ ಇಂಜೆಕ್ಷನ್ ತೆಗೆದುಕೊಳ್ಳಲೇಬೇಕು. ಆದರೆ, ಇದೀಗ ಕೊರೊನಾ ಲಾಕ್ಡೌನ್ನಿಂದ ಔಷಧಿ ತರಲು ಆಗುತ್ತಿಲ್ಲ. ಹೀಗಾಗಿ ದಯವಿಟ್ಟು ಸಹಾಯ ಮಾಡಿ ಎಂದು ಅಳಲು ತೋಡಿಕೊಂಡಿದ್ದಾಳೆ.