ಕಲಬುರಗಿ ಜಿಲ್ಲೆಯಲ್ಲಿ ಸರಳ ಈದ್ ಮಿಲಾದ್ ಹಬ್ಬ ಆಚರಣೆ - ಕಲಬುರಗಿ ಜಿಲ್ಲೆಯಲ್ಲಿ ಸರಳ ಈದ್ ಮಿಲಾದ್ ಹಬ್ಬ ಆಚರಣೆ
🎬 Watch Now: Feature Video
ಕಲಬುರಗಿ: ಕೋವಿಡ್ ಸೋಂಕಿನ ಆತಂಕದಿಂದ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಪ್ರವಾದಿ ಮಹಮ್ಮದ್ ಪೈಗಂಬರ ಜನ್ಮದಿನಾಚರಣೆ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಈದ್ ಹಬ್ಬದ ಅಂಗವಾಗಿ ಪ್ರತಿ ವರ್ಷ ಬೃಹತ್ ಮೆರವಣಿಗೆ ಆಯೋಜಿಸಲಾಗುತ್ತಿತ್ತು. ಇಸ್ಲಾಂ ಧರ್ಮದ ಪ್ರತೀಕವಾದ ಸ್ಥಬ್ಧ ಚಿತ್ರಗಳ ಮೆರವಣಿಗೆ, ಕುದುರೆ, ಒಂಟೆಗಳ ಮೇಲೆ ಸವಾರಿ, ಕವಾಲಿ ಗಾಯನ ಸೇರಿದಂತೆ ಇತ್ಯಾದಿಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಆಯೋಜಿಸಲಾಗಿತ್ತು. ಆದರೆ, ಕೊರೊನಾ ಹಿನ್ನೆಲೆ ಮನೆಗಳಲ್ಲಿಯೇ ಹಬ್ಬ ಆಚರಿಸುವಂತೆ ವಕ್ಫ್ ಬೋರ್ಡ್ ಮನವಿ ಮಾಡಿತ್ತು. ಹಾಗಾಗಿ ಮುಸ್ಲಿಂ ಬಾಂಧವರು ಮನೆಗಳಲ್ಲಿಯೇ ಹಬ್ಬವನ್ನು ಆಚರಿಸಿದರು.