ಕಾಫಿನಾಡಿನ ಜನತೆಗೂ ಕೊರೊನಾ ಭಯ: ಗಣೇಶ ಚತುರ್ಥಿ ಆಚರಣೆಗಿಲ್ಲ ಸಡಗರ-ಸಂಭ್ರಮ - Ganesha Festival in Chikkamagaluru
🎬 Watch Now: Feature Video
ಚಿಕ್ಕಮಗಳೂರು: ಪ್ರತಿ ವರ್ಷ ಗೌರಿ-ಗಣೇಶ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದ ಕಾಫಿನಾಡಿನ ಜನತೆಗೆ ಈ ಬಾರಿ ಕೊರೊನಾ ವೈರಸ್ನ ಭಯ ಕಾಡುತ್ತಿದೆ. ಹಿಂದೆಲ್ಲಾ ಮುಂಜಾನೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದವರು ಈ ಬಾರಿ ದೇವಸ್ಥಾನಗಳಿಗೆ ಬಾರದೆ, ಪೂಜೆ ಪುನಸ್ಕಾರಗಳನ್ನು ಮನೆಯಲ್ಲಿಯೇ ನೆರವೇರಿಸತೊಡಗಿದ್ದಾರೆ. ಪರಿಣಾಮ ನಗರದ ಬೋಳ ರಾಮೇಶ್ವರ ದೇವಸ್ಥಾನ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ದೇಗುಲಕ್ಕೆ ಭೇಟಿ ನೀಡುವ ಭಕ್ತರಲ್ಲಿ ಶೇ 70 ರಷ್ಟು ಕುಸಿತವಾಗಿದೆ ಎಂದು ಮುಖ್ಯ ಅರ್ಚಕರು ಹೇಳಿದ್ದಾರೆ. ಈ ಕುರಿತಾದ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.