ಪೇಡಾ ನಗರಿಯಲ್ಲಿ ಸೀಗೆ ಹುಣ್ಣಿಮೆ ಸಂಭ್ರಮ, ಯುವಕರ ಭರ್ಜರಿ ಹೆಜ್ಜೆಮೇಳ - ಯುವಕರ ಭರ್ಜರಿ ಹೆಜ್ಜೆಮೇಳ
🎬 Watch Now: Feature Video
ಧಾರವಾಡದಲ್ಲಿ ಹೆಜ್ಜೆಮೇಳ ಆಡುವ ಮೂಲಕ ಸಂಭ್ರಮದಿಂದ ಸೀಗೆ ಹುಣ್ಣಿಮೆ ಆಚರಿಸಿದರು. ಹಬ್ಬದ ಪ್ರಯುಕ್ತ ಗ್ರಾಮದ ಸುಮಾರು ನಾಲ್ಕೈದು ಹೆಜ್ಜೆ ಕಲಾತಂಡಗಳು ಗ್ರಾಮದಲ್ಲಿ ಹೆಜ್ಜೆ ಆಡಿದರು. ಸ್ವಾತಂತ್ರ್ಯ ಹೋರಾಟಗಾರರು, ಸಂಗೊಳ್ಳಿ ರಾಯಣ್ಣ,ಕಿತ್ತೂರ ಚೆನ್ನಮ್ಮ ಅವರ ಮೇಲಿನ ಹೆಜ್ಜೆ ಪದಗಳನ್ನು ಪ್ರಮುಖರು ಹಾಡುತ್ತಿದ್ದರೆ,ಇತ್ತ ಯುವಕರು ಹುಮ್ಮಸ್ಸಿನಿಂದ ಕುಣಿದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.ಇನ್ನು ಸೀಗೆ ಹುಣ್ಣಿಮೆ ಹಿನ್ನೆಲೆ ಮುಂಜಾನೆಯಿಂದಲೇ ಜನ ಹೊಲಕ್ಕೆ ಹೋಗಿ ಪೂಜೆ ಮಾಡಿ ವಿಶೇಷವಾಗಿ ಹಬ್ಬ ಆಚರಿಸಿದ್ರು.