ಧರ್ಮ ಸಾಮರಸ್ಯದಲ್ಲಿ ಅರಳಿತು ದೇವಾಲಯ: ಕರಾವಳಿಯಲ್ಲಿ 'ಸಿದ್ಧಿ'ಸಿತು ಕೋಮು ಸೌಹಾರ್ದತೆ
🎬 Watch Now: Feature Video
ಉಡುಪಿ: ಕರಾವಳಿಯಲ್ಲಿ ಕೋಮು ಸೌಹಾರ್ದ ಸಾರುವ ಹತ್ತಾರು ನಿದರ್ಶನಗಳು ನಮ್ಮ ಮುಂದಿವೆ. ಈ ಸಾಲಿಗೆ ಜಿಲ್ಲೆಯ ಶಿರ್ವ ಮುಖ್ಯರಸ್ತೆಯ ಮಟ್ಟಾರು ಅಟ್ಟಿಂಜ ಕ್ರಾಸ್ನ ಶ್ರೀ ಸಿದ್ಧಿವಿನಾಯಕ ದೇವಾಲಯ ಸೇರಿದೆ. ಇದರ ವಿಶೇಷ ಎಂದರೆ ಒಂದು ಬದಿಯಲ್ಲಿ ಮುಸಲ್ಮಾನರ ಪವಿತ್ರ ಮಸೀದಿ ಕೂಡ ಇದ್ದು, ಅದರ ಎದುರಿಗೆ ದೇವಾಲಯವೂ ತಲೆ ಎತ್ತಿದೆ. ಇಷ್ಟೇ ಅಲ್ಲ, ಇಂದು ಲೋಕಾರ್ಪಣೆಗೊಂಡ ಈ ಸಿದ್ಧಿವಿನಾಯಕ ದೇವಸ್ಥಾನ ನಿರ್ಮಿಸಿ ಹಿಂದೂಗಳಿಗೆ ಕೊಡುಗೆಯಾಗಿ ನೀಡಿರುವುದು ಒಬ್ಬ ಕ್ರಿಶ್ಚಿಯನ್ ವ್ಯಕ್ತಿ ಎಂಬುವುದು ಇನ್ನೊಂದು ವಿಶೇಷ. 77 ವರ್ಷದ ಗೇಬ್ರಿಯಲ್ ಫೇಬಿಯನ್ ನಜರತ್ ಅವರ ತಂದೆಯಿಂದ ಬಳುವಳಿಯಾಗಿ ಬಂದ ಜಾಗದಲ್ಲಿ ಭವ್ಯ ದೇವಸ್ಥಾನ ನಿರ್ಮಿಸಿ ಹಿಂದೂಗಳಿಗೆ ಹಸ್ತಾಂತರಿಸಿದ್ದಾರೆ.