ಅದ್ಧೂರಿಯಾಗಿ ಜರುಗಿದ ಶ್ರೀಶಿವಚಿದಂಬರೇಶ್ವರ ರಥೋತ್ಸವ.. - Kannada news
🎬 Watch Now: Feature Video

ಕೊಪ್ಪಳ: ತಾಲೂಕಿನ ಸುಕ್ಷೇತ್ರ ಕರ್ಕಿಹಳ್ಳಿಯ ಶ್ರೀಶಿವಚಿದಂಬರೇಶ್ವರ ರಥೋತ್ಸವ ಇಂದು ಮಧ್ಯಾಹ್ನ ಭಕ್ತಿಭಾವದಿಂದ ನೆರವೇರಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಗುರುಪೂರ್ಣಿಮೆಯಂದು ನಡೆಯುವ ರಥೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜುಲೈ 7ರಿಂದ ಆರಂಭಗೊಂಡಿರುವ ಜಾತ್ರೆ 17ರವರೆಗೆ ನಡೆಯಲಿದೆ. ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧೆಡೆಯಿಂದ ಬಂದ ಭಜನಾ ತಂಡಗಳು ಇದರಲ್ಲಿ ಭಾಗವಹಿಸಿದ್ದು ವಿಶೇಷ.