ಹೊತ್ತಿ ಉರಿದ ಬುಲೆಟ್ ಬೈಕ್: ಶಾರ್ಟ್ ಸರ್ಕ್ಯೂಟ್ ಶಂಕೆ! - ಬುಲೆಟ್ ಬೈಕ್ಗೆ ಬೆಂಕಿ
🎬 Watch Now: Feature Video

ಕಾರವಾರ: ಇದ್ದಕ್ಕಿದ್ದಂತೆ ಬುಲೆಟ್ ಬೈಕ್ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ಕಾರವಾರ ತಾಲೂಕಿನ ಗಾಂವಗೇರಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ. ರಮಾಕಾಂತ ನಾಯ್ಕ ಎಂಬುವವರು ತಮ್ಮ ಬೈಕ್ ರಸ್ತೆ ಬದಿ ನಿಲ್ಲಿಸಿ ಮೀನು ಮಾರುಕಟ್ಟೆಗೆ ತೆರಳಿದ್ದರು. ಬೈಕ್ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿತ್ತು. ಬಳಿಕ ನೋಡ ನೋಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದರಾದೂ ಅಷ್ಟರಲ್ಲಾಗಲೇ ಬೈಕ್ ಭಾಗಶಃ ಸುಟ್ಟು ಕರಕಲಾಗಿತ್ತು. ಬೈಕ್ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.