thumbnail

ಬಾಗಲಕೋಟೆಯಲ್ಲಿ ಶಿವರಾತ್ರಿ ಸಂಭ್ರಮ: ಶಿವಸನ್ನಿಧಿಯಲ್ಲಿ ವಿಶೇಷ ಪೂಜೆ-ಪುನಸ್ಕಾರ

By

Published : Mar 11, 2021, 6:48 PM IST

ಬಾಗಲಕೋಟೆ: ಶಿವರಾತ್ರಿ ಹಿನ್ನೆಲೆ ಎಂಜಿ ರಸ್ತೆಯಲ್ಲಿರುವ ಶಿವನ ದೇವಸ್ಥಾನದಲ್ಲಿ ಇಂದು ಬೆಳಗ್ಗೆಯಿಂದಲೇ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಶಿವನಿಗೆ ರುದ್ರಾಭಿಷೇಕ, ಹೋಮ ಹವನಗಳು ನಡೆಯುತ್ತಿವೆ. ಅಲ್ಲದೇ ನಗರದ ವಿವಿಧೆಡೆ ಶಿವನ ದೇವಸ್ಥಾನಕ್ಕೆ ತೆರಳಿ ಭಕ್ತರು ಶಿವನ ದರ್ಶನ ಪಡೆಯುತ್ತಿದ್ದಾರೆ. ವಿಶ್ವ ಹಿಂದು ಪರಿಷತ್​​ ವತಿಯಿಂದ ವಿದ್ಯಾಗಿರಿಯ‌ ಗೌರಿ ಕಲ್ಯಾಣ ಭವನದಲ್ಲಿ ಸಾಮೂಹಿಕ ಇಷ್ಟ ಲಿಂಗ ಪೂಜೆ, ಹೋಮ, ಹವನ ನಡೆಸುವ ಮೂಲಕ ಶಿವರಾತ್ರಿ ಆಚರಣೆ ಮಾಡಿದರು. ಜಾಗರಣೆಗಾಗಿ ಇಂದು ರಾತ್ರಿಯಿಂದ ಬೆಳಗ್ಗಿನ ವರೆಗೆ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.