ಬೆಂಗಳೂರಿನಲ್ಲಿ ಶಿವರಾತ್ರಿ ಸಂಭ್ರಮ...ಶಿವೋಹಂ ಶಿವ ದೇವಾಲಯದತ್ತ ಭಕ್ತ ಗಣ - Shivaratri festival
🎬 Watch Now: Feature Video
ಮಾಘ ಮಾಸದ ಶುಕ್ಲ ಪಕ್ಷದ ಶಿವರಾತ್ರಿ ಈ ಬಾರಿ ವಿಶೇಷವಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಶಿವರಾತ್ರಿ ಸಂಭ್ರಮ ಕಳೆಗಟ್ಟಿದೆ. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬೃಹತ್ ಶಿವನ ಮೂರ್ತಿ ಹೊಂದಿರುವ ಶಿವೋಹಂ ಶಿವ ದೇವಾಲಯದಲ್ಲಿ ಇಂದು ವಿಶೇಷ ಪೂಜೆ ಅಲಂಕಾರ ಹಾಗೂ ಜಾಗರಣೆ ಕಾರ್ಯಕ್ರಮಗಳು ನಡೆಯುತ್ತಿವೆ. ಬೆಳಗ್ಗೆಯಿಂದಲೇ ಭಕ್ತರು ದರ್ಶನಕ್ಕಾಗಿ ಸಾಲುಗಟ್ಟಿ ನಿಂತು ಶಿವನ ಮೂರ್ತಿಯ ದರ್ಶನವನ್ನು ಪಡೆಯುತ್ತಿದ್ದಾರೆ. ವಿಶೇಷವಾಗಿ ಮೂರ್ತಿಗೆ ದೀಪಾರತಿ, ಶಿವಲಿಂಗಕ್ಕೆ ಹಾಲಿನ ಅಭಿಷೇಕ, ರುದ್ರಾಕ್ಷಿ ಜಪ, ಶಿವನ ಹಾಡುಗಳಿಂದ ಭಕ್ತರು ಭಕ್ತಿಯಲ್ಲಿ ಮಿಂದೆದ್ದಿದ್ದಾರೆ.