ಮುಂದಿನ ಚುನಾವಣೆ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ ಶಿವರಾಮೇಗೌಡ - contest in the next election
🎬 Watch Now: Feature Video
ಮಂಡ್ಯ: ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಮುಂದಿನ ಸಿಎಂ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಬ್ಯಾಟ್ ಬೀಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಮೇಗೌಡ, ಮತದಾರರ ಅಭಿಪ್ರಾಯದಂತೆ ನಡೆಯುವೆ.ಇಲ್ಲಿವರೆಗೂ ಅವರಿವರ ಗೆಲುವಿಗಾಗಿ ಶ್ರಮಿಸಿದ್ದೇನೆ. ನನಗೆ ಕ್ಷೇತ್ರದಲ್ಲಿ ನನ್ನದೆಯಾದ ಮತಬ್ಯಾಂಕ್ ಇದೆ. ಮತದಾರರ ನಿರ್ಧಾರವೇ ಅಂತಿಮ ಅನ್ನೋ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದರು.