ಮಗು ಜೀವ ಉಳಿಸಲು ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ - zero traffic for 10 days heart disease baby,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6023527-214-6023527-1581333903925.jpg)
ಪುಟ್ಟ ಕಂದಮ್ಮನ ಜೀವ ಉಳಿಸಲು ಹಾವೇರಿಯಿಂದ ಹುಬ್ಬಳ್ಳಿಗೆ ಮಗುವನ್ನು ಝೀರೋ ಟ್ರಾಫಿಕ್ನಲ್ಲಿ ಕರೆತಂದ ಘಟನೆ ಬಗ್ಗೆ ಕೇಳಿದ್ದೆವು. ಮೊನ್ನೆಯಷ್ಟೆ 40 ದಿನದ ಮಗುವನ್ನು ಹೃದಯ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕರೆ ತರಲಾಗಿದನ್ನು ನೋಡಿದ್ದೆವು. ಅತಂಹದ್ದೇ ಮತ್ತೊಂದು ಘಟನೆ ಮಲೆನಾಡಿನಲ್ಲಿ ನಡೆದಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 10 ದಿನದ ಹಸುಗೂಸನ್ನು ವೈದ್ಯರ ಸಲಹೆ ಮೇರೆಗೆ ಬೆಂಗಳೂರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕರೆದೊಯ್ಯಲಾಗಿದೆ.