ಹುಬ್ಬಳ್ಳಿ-ಧಾರವಾಡದಲ್ಲಿ ಮಳೆ ಆರ್ಭಟ: ಶಿರಸಿಯಲ್ಲಿ ಕೊಚ್ಚಿ ಹೋಯ್ತು ಸೇತುವೆ! - Sirsi bridge collapse
🎬 Watch Now: Feature Video

ಶಿರಸಿ: ಹುಬ್ಬಳ್ಳಿ-ಧಾರವಾಡದಲ್ಲಿ ಅಧಿಕ ಮಳೆ ಸುರಿದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಯಲ್ಲಾಪುರ-ಮುಂಡಗೋಡು ಮಾರ್ಗದ ಸಿಡಿಲಗುಂಡಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಮೇಲೆ ನೀರು ಹರಿದು ಕೊಚ್ಚಿ ಹೋಗಿದೆ. ಸೇತುವೆ ಕೊಚ್ಚಿ ಹೋದ ಪರಿಣಾಮ ಮುಂಡಗೋಡು, ಯಲ್ಲಾಪುರ, ಸಿಡ್ಲಗುಂಡಿ ಸಂಚಾರ ಬಂದ್ ಆಗಿದೆ. ಈ ಹಿಂದೆ ಅಧಿಕ ಮಳೆಯಿಂದ ಸಿಡ್ಲಗುಂಡಿ ಹೊಳೆ ಸೇತುವೆ ಕೊಚ್ಚಿ ಹೋಗಿದ್ದು, ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಆದರೆ ನಿನ್ನೆಯಿಂದ ಅಧಿಕ ಮಳೆ ಹಿನ್ನೆಲೆಯಲ್ಲಿ ಬೇಡ್ತಿ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ತಾತ್ಕಾಲಿಕ ಸೇತುವೆ ಸಹ ಕೊಚ್ಚಿಹೋಗಿ, ಸಂಚಾರ ಅಸ್ತವ್ಯಸ್ತವಾಗಿದೆ.