ಶಿರಹಟ್ಟಿ ಶಾಸಕ ರಾಮಣ್ಣರ ಕಬಡ್ಡಿ ಕ್ರೇಜ್... ರೈಡ್ಗೆ ಹೋಗಿ ಮುಗ್ಗರಿಸಿ ಬಿದ್ದ ಎಂಎಲ್ಎ - ಮುಗ್ಗರಿಸಿ ಬಿದ್ದಿರೋ ರಾಮಣ್ಣ ಲಮಾಣಿ
🎬 Watch Now: Feature Video
ಗದಗ: ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಕ್ರಿಡಾಸಕ್ತಿ ಪ್ರದರ್ಶಿಸಲು ಹೋಗಿ ಮಣ್ಣು ಮುಕ್ಕಿದ್ದಾರೆ. ಕ್ರೀಡೆಯಲ್ಲಿ ಸ್ಪರ್ಧಾಳುಗಳಿಗೆ ಸ್ಪೂರ್ತಿ ತುಂಬಲಿಕ್ಕೆ ಹೋದ್ರೋ, ಅಥವಾ ತಾವೇ ತೊಡೆ ತಟ್ಟೋ ಮೂಲಕ ಸ್ಪೂರ್ತಿ ಪಡೆಯೋಕೆ ಹೋದ್ರೋ ಗೊತ್ತಿಲ್ಲ. ಕಬಡ್ಡಿ, ಕಬಡ್ಡಿ ಅನ್ನುತ್ತ ಫೀಲ್ಡ್ಲ್ಲಿದ್ದವರ ಮೇಲೆ ನುಗ್ಗಲು ಹೋಗಿ ತಾವೇ ಮುಗ್ಗರಿಸಿ ಬಿದ್ದಿದ್ದಾರೆ. ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮದ ವೀರಭದ್ರೇಶ್ವರ ಜಾತ್ರೆ ನಿಮಿತ್ತ ನಡೆದ ಕ್ರೀಡಾಕೂಟ ಉದ್ಘಾಟಿಸಿದ ನಂತರ ತಾವೂ ಒಂದು ಕೈ ನೋಡೇ ಬಿಡೋಣ ಅಂತಾ ಅಖಾಡಕ್ಕಿಳಿದಾಗ ಈ ಅವಘಡ ಸಂಭವಿಸಿದೆ. ಶಾಸಕ ಆಟ ಆಡೋಕೆ ಹೋಗಿ ಮುಗ್ಗರಿಸಿ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕೆಲವರು ಈ ವಯಸ್ಸಿನಲ್ಲಿ ಯಾಕಪ್ಪಾ ಬೇಕು ಇವರಿಗೆ ಇದೆಲ್ಲಾ ಅಂದ್ರೆ, ಇನ್ನೂ ಕೆಲವರು ಈ ವಯಸ್ಸಿನಲ್ಲೂ ಅವರ ಕ್ರೀಡಾ ಸ್ಪೂರ್ತಿ ಮೆಚ್ಚಲೇಬೇಕು ಎನ್ನುತ್ತಿದ್ದಾರೆ.
Last Updated : Sep 8, 2019, 8:01 AM IST