ಶಿವಮೊಗ್ಗದಲ್ಲಿ ಹೇಗಿದೆ ಭಾನುವಾರದ ಲಾಕ್ ಡೌನ್: ಇಲ್ಲಿದೆ ನೋಡಿ ಪ್ರತ್ಯಕ್ಷ ವರದಿ - ಶಿವಮೊಗ್ಗ ಭಾನುವಾರದ ಲಾಕ್ ಡೌನ್
🎬 Watch Now: Feature Video

ಶಿವಮೊಗ್ಗ: ಕೊರೊನಾ ನಿಯಂತ್ರಿಸುವ ಸಲುವಾಗಿ ಜಾರಿಗೊಳಿಸಲಾಗಿರುವ ಭಾನುವಾರದ ಲಾಕ್ ಡೌನ್ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಎರಡು ವಾರಗಳಂತೆ ಇಂದೂ ಕೂಡ ನಗರ ಸ್ತಬ್ಧವಾಗಿದ್ದು, ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಆದರೆ, ಕೆಲವೆಡೆ ಬೆರಳೆಣಿಕೆಯ ವಾಹನಗಳು, ಜನರು ಸಂಚರಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ, ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಆಗಿದ್ದು, ರಸ್ತೆಗಳು ಖಾಲಿ ಖಾಲಿಯಾಗಿವೆ.